ಗ್ರಾಮ ಪಂಚಾಯತಿ

 

ಪ್ರಕಾರ್ಯಗಳು, ಕರ್ತವ್ಯಗಳು ಮತ್ತು ಅಧಿಕಾರಿಗಳು

 

1. ಪ್ರತಿ ವರ್ಷ ಶೇ.10 ರಷ್ಟು  ಮನೆಗಳಿಗೆ ಕಡಿಮೆ ಇಲ್ಲದಂತೆ ಶೌಚಾಲಯಗಳನ್ನು ಒದಗಿಸುವುದು ಮತ್ತು ಸಾಧ್ಯವಾದಷ್ಟು ಬೇಗನೆ ಎಲ್ಲಾ ಮನೆಗಳಿಗೆ ಸೌಲಭ್ಯವನ್ನು ಒದಗಿಸುವ ಗುರಿ ಸಾಧಿಸುವುದು.

2. ಪುರುಷರು ಮತ್ತು ಮಹಿಳೆಯರಿಗೆ ಸಾಕಷ್ಟು ಸಮುದಾಯ ಶೌಚಾಲಯಗಳನ್ನು ನಿಮಿಱಸುವುದು ಮತ್ತು ಅವುಗಳ ನಿರ್ವಹಿಸುವುದು.

3. ಸಾಕಷ್ಟು ಸಂಪನ್ಮೂಲಗಳನ್ನು ಸೃಜಿಸಿ ತಾನೇ ಅಥವಾ ವಾರ್ಷಿಕ ಕರಾರಿನ ಮೂಲಕವಾಗಲಿ ನೀರು ಪೂರೈಕೆ ಕಾಮಗಾರಿಗಳನ್ನು ನಿರ್ವಹಿಸುವುದು.

4. ಅಧಿನಿಯಮದಡಿ ವಿಧಿಸಬಹುದಾದ ತೆರಿಗೆಗಳು, ದರಗಳು ಮತ್ತು ಶುಲ್ಕಗಳನ್ನು ನಿಯತಕಾಲಿಕವಾಗಿ ಪರಿಶೀಲಿಸುವುದು ಮತ್ತು ವಸೂಲು ಮಾಡುವುದು.

5. ಪ್ರಾಥಮಿಕ ಶಾಲೆಗೆ ಮಕ್ಕಳ ಸಾರ್ವತ್ರಿಕ ದಾಖಲಾತಿಯನ್ನು ಖಚಿತಪಡಿಸಿಕೊಳ್ಳುವುದು.

6. ಮಕ್ಕಳಿಗೆ ಸಾರ್ವತ್ರಿಕವಾಗಿ ರೋಗನಿರೋಧಕ ಚುಚ್ಚು ಮದ್ದು ಕಾರ್ಯಕ್ರಮವನ್ನು ಸಾಧಿಸುವುದು.

7. ಜನನ ಮತ್ತು ಮರಣಗಳ ತ್ವರಿತ ನೊಂದಣಿ ಮತ್ತು ಅದನ್ನು ವರದಿ ಮಾಡುವದನ್ನು ಖಚಿತಪಡಿಸಿಕೊಳ್ಳುವುದು.

8. ನೈರ್ಮಲ್ಯ ವ್ಯವಸ್ಥೆ ಮತ್ತು ಸರಿಯಾದ ಚರಂಡಿ ವ್ಯವಸ್ಥೆಯನ್ನು ಒದಗಿಸುವುದು.

9. ಸಾರ್ವಜನಿಕ ರಸ್ತೆಗಳ ನಿರ್ಮಾಣ, ದುರಸ್ಥಿ ಮತ್ತು ನಿರ್ವಹಣೆ.

10. ಸಾರ್ವಜನಿಕ ರಸ್ತೆ ಅಥವಾ ಸಾರ್ವಜನಿಕ ಸ್ಥಳಗಳ ಮೇಲಿನ ಒತ್ತುವರಿಗಳನ್ನು ತೆಗೆದುಹಾಕುವುದು.

11. ಸಾಕಷ್ಟು ರಸ್ತೆ ದೀಪಗಳನ್ನು ಒದಗಿಸುವುದು ಮತ್ತು ವಿಧ್ಯತ್ ಶುಲ್ಕಗಳನ್ನು ನಿಯತವಾಗಿ ಸಂದಾಯ ಮಾಡುವುದು.

12. ಅನೈರ್ಮಲ್ಯಕರ ಗುಂಡಿಗಳನ್ನು ತುಂಬಿಸುವುದು ಮತ್ತು ಅನಾರೋಗ್ಯಕರ ಪ್ರದೇಶಗಳನ್ನು ಆರೋಗ್ಯಕರವನ್ನಾಗಿ ಮಾಡುವುದು.

13. ಹುಚ್ಚುನಾಯಿಗಳನ್ನು ಮತ್ತು ಮಾಲಿಕರಿಲ್ಲದ ನಾಯಿಗಳನ್ನು ಸಾಯಿಸುವುದು.

14. ಅದರಲ್ಲಿ ನಿಹಿತವಾಗಿರುವ ಎಲ್ಲ ಸಮುದಾಯ ಆಸ್ತಿಗಳನ್ನು  ನಿರ್ವಹಿಸುವುದು.

15. ಜನಗಣತಿ, ಬೆಳೆ-ಗಣತಿ, ಜಾನುವಾರು-ಗಣತಿ, ನಿರುದ್ಯೋಗಿಗಳ ಮತ್ತು ಬಡತನ ರೇಖೆಗಿಂತ ಕೆಳಗಿರುವ ವ್ಯಕ್ತಿಗಳ ಗಣತಿಗೆ ಸಂಬಂಧಪಟ್ಟ ದಾಖಲೆಗಳನ್ನು ನಿರ್ವಹಿಸುವುದು.

16. ನಿರುಪಯುಕ್ತ ವಸ್ತುಗಳನ್ನು ಮತ್ತು ಗೊಬ್ಬರವನ್ನು ರಾಸಿ ಹಾಕುವುದಕ್ಕೆ ವಾಸದ ಮನೆಗಳಿಂದ ದೂರದಲ್ಲಿರುವ ಜಾಗಗಳನ್ನು ಪ್ರತ್ಯೇಖವಾಗಿ ಗುರುತಿಸುವುದು.

17. ಜೈವಿಕ ವೈವಿದ್ಯತೇಯನ್ನು ಸಂರಕ್ಷಿಸುವುದು.  

 

ಬೆಳಗಾವಿ ಜಿಲ್ಲೆಯ ತಾಲ್ಲೂಕುಗಳ ವ್ಯಾಪ್ತಿಗೆ ಬರುವ ಗ್ರಾಮ ಪಂಚಾಯತಗಳ ವಿವರ

ತಾಲ್ಲೂಕು

ಗ್ರಾಮ ಪಂಚಾಯತಗಳ ಸಂಖ್ಯೆ

ಅಥಣಿ

55

ಬೈಲಹೊಂಗಲ

50

ಬೆಳಗಾವಿ

59

ಚಿಕ್ಕೋಡಿ

63

ಗೋಕಾಕ

56

ಹುಕ್ಕೇರಿ

52

ಖಾನಾಪೂರ

51

ರಾಯಬಾಗ

38

ರಾಮದುರ್ಗ

37

ಸವದತ್ತಿ

45

ಒಟ್ಟು

506