ಜಿಲ್ಲಾ ಪಂಚಾಯತ ಬಗ್ಗೆ  

 

ಕರ್ನಾಟಕ ರಾಜ್ಯವು ಪಂಚಾಯತ ರಾಜ್ ವ್ಯವಸ್ಥೆಯ ವಿಕೇಂದ್ರಿಕೃತ ಆಡಳಿತದಲ್ಲಿ ಮುಂಚುನಿಯಲ್ಲಿದೆ.

ರಾಜ್ಯದಲ್ಲಿನ ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮಗಳಲ್ಲಿ ಜನರು ಹೆಚ್ಚಾಗಿ ಪಾಲ್ಗೊಳ್ಳುವಂತೆ ಮಾಡುವ ಮತ್ತು ಕಾರ್ಯಕ್ರಮಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಅನುಷ್ಟಾನಕ್ಕೆ

ತರುವ ಉದ್ದೇಶದಿಂದ ಗ್ರಾಮ, ತಾಲ್ಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಚುನಾಯಿತ ಸಂಸ್ಥೆಗಳು ಇರುವ 3 ಹಂತದ ಪಂಚಾಯತ ರಾಜ್ ವ್ಯವಸ್ಥೆಯನ್ನು ಸ್ಥಾಪಿಸಲಾಯಿತು. 

1993 ಪಂಚಾಯತ ರಾಜ್ ವಿದೇಯಕದ ಮುಖ್ಯಾಂಶಗಳು ಕೆಳಗಿನಂತಿವೆ.

1. ಈಗಾಗಲೇ ಅಂಕಿ ಅಂಶಗಳನ್ನು ಪ್ರಕಟಿಸಲಾಗಿರುವ ಹಿಂದಿನ ಜನಗಣತಿಯಿಂದ ಖಚಿತಪಡಿಸಿಕೊಳ್ಳಲಾದ ಜನಸಂಖ್ಯೆ ಆಧಾರದ ಮೇಲೆ 3 ಹಂತದ ಪಂಚಾಯತಿ ವ್ಯವಂಸ್ಥೆಯನ್ನು ಸ್ಥಾಪಿಸಲಾಗಿದೆ.

2. ಅನುಸೂಚಿತ ಜಾತಿ ಮತ್ತು ಪಂಗಡಗಳಿಗೆ ಸೇರಿದವರಿಗೆ ಅವರವರ ಸಂಖ್ಯೆಯ ಪ್ರಮಾಣಕ್ಕನುಸಾರವಾಗಿ ಸ್ಥಾನಗಳನ್ನು ಮೀಸಲಾತಿ ಮತ್ತು ಮಹಿಳೆಯರಿಗೆ ಎಲ್ಲಾ ಹಂತಗಳಲ್ಲಿ ಮೂರನೇ ಒಂದರಷ್ಟು ಸ್ಥಾನಗಳನ್ನು ಮೀಸಲಿಡಲು ಉಪಬಂದ ಕಲ್ಪಿಸಲಾಗಿದೆ.

3. ಇದರಲ್ಲಿ ಹಿಂದುಳಿದ ವರ್ಗಗಳಿಗೆ ಸೇರಿದವರಿಗಾಗಿ ಎಲ್ಲಾ ಹಂತಗಳಲ್ಲಿಯೂ ಸ್ಥಾನಗಳು ಮತ್ತು ಅಧ್ಯಕ್ಷರ ಹುದ್ದೆಗಳು ಮೀಸಲಾತಿಯನ್ನು ಸಹ ಕಲ್ಪಿಸಲಾಗಿದೆ.

4. ಅನುಸೂಚಿತ ಜಾತಿ ಮತ್ತು ಪಂಗಡಗಳಿಗೆ ಸೇರಿದವರಿಗೆ ಹಾಗೂ ಮಹಿಳೆಯರಿಗೆ ಅಧ್ಯಕ್ಷರ ಹುದ್ದೆಗಳ ಮೀಸಲಾತಿಯನ್ನು ಸಹ ಕಲ್ಪಿಸಲಾಗಿದೆ.

5. ರಾಜ್ಯ ಚುನಾವಣಾ ಆಯೋಗ, ಹಣಕಾಸು ಆಯೋಗ ಮತ್ತು ಜಿಲ್ಲಾ ಯೋಜನಾ ಸಮಿತಿ ಇವುಗಳ ರಚನೆಯು ಸಹ ಇದರಲ್ಲಿ ಒಳಗೊಂಡಿದೆ.